Monday, May 3, 2010

ರಾಷ್ಟ್ರಮಟ್ಟದ ಎನ್.ಟಿ.ಎಸ್.ಇ. ಪರೀಕ್ಷೆ: ಸಿದ್ಧತೆ ಹೇಗೆ?

ಪ್ರಜಾವಾಣಿ » ಶಿಕ್ಷಣ ಪುರವಣಿ
ರಾಷ್ಟ್ರಮಟ್ಟದ ಎನ್.ಟಿ.ಎಸ್.ಇ. ಪರೀಕ್ಷೆ: ಸಿದ್ಧತೆ ಹೇಗೆ?
byline52010 ~~-->
ಅರುಣ್ ಕುಮಾರ್.ಟಿ
ಮೇ 9ರಂದು ಎನ್.ಟಿ.ಎಸ್.ಇ. ಪರೀಕ್ಷೆ. ಈ ಪರೀಕ್ಷೆ ಎದುರಿಸಲು ನಿಮ್ಮ ಸಿದ್ಧತೆಗೆ ಒಂದಿಷ್ಟು ಮಾಹಿತಿ
ರಾಜ್ಯಮಟ್ಟ(ಪ್ರಥಮ ಹಂತ)ದ ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಗಳಿಸಿ, ಆಯ್ಕೆಯಾಗಿ ರಾಷ್ಟ್ರಮಟ್ಟ(ದ್ವಿತೀಯ ಹಂತ)ದ ಪರೀಕ್ಷೆಯನ್ನು ಎದುರಿಸಲು ಹೊರಟಿರುವ ಎಲ್ಲಾ ವಿದ್ಯಾರ್ಥಿಗಳಿಗೂ ಅಭಿನಂದನೆಗಳು.ರಾಷ್ಟ್ರಮಟ್ಟದ ಎನ್.ಟಿ.ಎಸ್.ಇ. (ನ್ಯಾಷನಲ್ ್ಯಲೆಂಟ್ ಸರ್ಚ್ ಎಕ್ಸಾಮಿನೇಷನ್) ಪರೀಕ್ಷೆಯನ್ನು ಎನ್.ಸಿ.ಇ.ಆರ್.ಟಿ. ನವದೆಹಲಿ, ಇವರು ಬರುವ ಮೇ 9ರ ಭಾನುವಾರದಂದು ಆರ್.ವಿ. ಬಾಲಕಿಯರ ಪ್ರೌಢಶಾಲೆ, ಜಯನಗರ, ಬೆಂಗಳೂರು ಇಲ್ಲಿ ನಡೆಸಲಿದ್ದಾರೆ. ರಾಷ್ಟ್ರಮಟ್ಟದ ಪರೀಕ್ಷೆಯು ಎರಡು ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡಿರುತ್ತದೆ. ಪ್ರತಿ ಪತ್ರಿಕೆಯಲ್ಲಿ 90 ನಿಮಿಷಗಳ ಅವಧಿಯಲ್ಲಿ ಒಂದು ಅಂಕದ 90 ವಸ್ತುನಿಷ್ಠ ಬಹು ಆಯ್ಕೆ ಮಾದರಿ (ಆಬ್ಜೆಕ್ಟಿವ್ ಮಲ್ಟಿಪಲ್ ಚಾಯ್ಸಿ ಟೈಪ್)ಯ ಕಡ್ಡಾಯ ಪ್ರಶ್ನೆಗಳು ಇರುತ್ತವೆ. ಇಲ್ಲಿ ಯಾವುದೇ ರೀತಿಯ ನೆಗೆಟಿವ್ ಅಂಕ ನೀಡಿಕೆ ಇರುವುದಿಲ್ಲ.
1. ಸಾಮಾನ್ಯ ಬೌದ್ಧಿಕ ಸಾಮರ್ಥ್ಯ ಪರೀಕ್ಷೆ (ಜೆನರಲ್ ಮೆಂಟಲ್ ಎಬಿಲಿಟಿ ಟೆಸ್ಟ್ -ಜಿಮ್ಯಾಟ್): ವಿದ್ಯಾರ್ಥಿಗಳಲ್ಲಿ ಕಾರಣ ನೀಡುವ, ವಿಶ್ಲೇಷಣೆ ಮತ್ತು ಸಂಶ್ಲೇಷಣೆ ಸಾಮರ್ಥ್ಯವನ್ನು ಪರೀಕ್ಷಿಸಲು ನಡೆಸಲಾಗುತ್ತದೆ. ಈ ಪತ್ರಿಕೆ 8ನೇ ತರಗತಿಯ ವಿದ್ಯಾರ್ಥಿಗಳಿಗೆ ಸಂಪೂರ್ಣ ಹೊಸದು. ಮತ್ತು ಇಲ್ಲಿ ವಿಭಿನ್ನ ರೀತಿಯ ಪ್ರಶ್ನೆಗಳನ್ನು ಕೇಳುವುದರಿಂದ ಅದಕ್ಕೆ ತಕ್ಕ ಮಟ್ಟಿನ ತಯಾರಿ ಅಗತ್ಯ. 2. ವ್ಯಾಸಂಗ ಪ್ರವೃತ್ತಿ ಪರೀಕ್ಷೆ (ಸ್ಕಾಲಾಸ್ಟಿಕ್ ಆ್ಯಪ್ಟಿಟ್ಯೂಡ್ ಟೆಸ್ಟ್- ಸ್ಯಾಟ್): ಈ ಪತ್ರಿಕೆಯಲ್ಲಿ 35 ಪ್ರಶ್ನೆಗಳು ಸಮಾಜ ವಿಜ್ಞಾನ (ಇತಿಹಾಸ, ಭೂಗೋಳ, ಪೌರನೀತಿ ಹಾಗೂ ಅರ್ಥಶಾಸ್ತ್ರ)ದಿಂದ, 35 ಪ್ರಶ್ನೆಗಳು ಮೂಲ ವಿಜ್ಞಾನ (ಭೌತಶಾಸ್ತ್ರ, ರಸಾಯನ ಶಾಸ್ತ್ರ ಮತ್ತು ಜೀವಶಾಸ್ತ್ರ)ದಿಂದ ಮತ್ತು 20 ಪ್ರಶ್ನೆಗಳು ಗಣಿತಕ್ಕೆ ಸಂಬಂಧಿಸಿರುತ್ತವೆ.ಪಠ್ಯವಸ್ತುಇದು ರಾಷ್ಟ್ರಮಟ್ಟದ ಪರೀಕ್ಷೆಯಾಗಿರುವುದರಿಂದ ಸ್ಟೇಟ್ ಅಥವಾ ಐ.ಸಿ.ಎಸ್.ಇ ಪಠ್ಯಕ್ರಮದ ವಿದ್ಯಾರ್ಥಿಗಳ ಅದರ ಜೊತೆಗೆ ಸಿ.ಬಿ.ಎಸ್.ಇ ಪಠ್ಯಕ್ರಮದ 8ನೇ ತರಗತಿಯ ವಿಜ್ಞಾನ, ಸಮಾಜ ವಿಜ್ಞಾನ ಮತ್ತು ಗಣಿತದ ಪುಸ್ತಕಗಳನ್ನು ಕಡ್ಡಾಯವಾಗಿ ಓದಬೇಕು. ಓದುವಾಗ ಪ್ರತಿ ಪ್ಯಾರಾದಲ್ಲೂ ಇರುವ ಮುಖ್ಯ ವಿಷಯಗಳ ಮೇಲೆ ನೀವೇ ಪ್ರಶ್ನೆಗಳನ್ನು ರಚಿಸಿ, ಉತ್ತರ ಕಂಡುಕೊಳ್ಳಿ ಹಾಗೂ ಸ್ನೇಹಿತರೊಂದಿಗೆ ಚರ್ಚಿಸಿ. ಇತರೆ ಪುಸ್ತಕಗಳುಎನ್.ಟಿ.ಎಸ್.ಇ. ಪರೀಕ್ಷೆಗೆಂದೇ ವಿಶೇಷವಾಗಿ ಸಿದ್ಧಪಡಿಸಿರುವ ಸಾಕಷ್ಟು ಪುಸ್ತಕಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ,. ಅವುಗಳಲ್ಲಿ ಮುಖ್ಯವಾದವುಗಳೆಂದರೆ TATA McGRAW-HILL'S, UPKAR's, BRIGHT Career's, Arihanth Publications ಇತ್ಯಾದಿ ಇವುಗಳನ್ನು ಓದಬಹುದು. ಈ ಪುಸ್ತಕಗಳಲ್ಲಿ ಎರಡೂ ಪತ್ರಿಕೆಗಳಿಗೂ (GMAT & SAT) ಸಂಬಂಧಿಸಿದ ವಿಷಯವನ್ನು ನೀಡಲಾಗಿದೆ. ಇದರಲ್ಲಿ ಕೆಲವು ಪುಸ್ತಕಗಳಲ್ಲಿ ಹಿಂದಿನ ವರ್ಷಗಳ ಪ್ರಶ್ನೆ ಪತ್ರಿಕೆಗಳನ್ನು ಉತ್ತರ ಸಹಿತ ಕೊಡಲಾಗಿದೆ. ಇವುಗಳನ್ನು ಗಮನಿಸಿದಾಗ ಯಾವ ರೀತಿಯ ಪ್ರಶ್ನೆಗಳು ಬರುತ್ತವೆಂಬುದು ತಿಳಿಯುತ್ತದೆ.ಅಲ್ಲದೇ ಪ್ರತಿ ವಿಷಯದಲ್ಲೂ ಪಠ್ಯಕ್ರಮಕ್ಕನುಸಾರವಾಗಿ ಒಂದೊಂದೇ ಪಾಠವನ್ನು ಅರ್ಥವಾಗುವಂತೆ ದೀರ್ಘವಾಗಿ ವಿವರಿಸಲಾಗಿದೆ. ಪ್ರತಿ ಪಾಠದ ಕೊನೆಯಲ್ಲಿ ಅದಕ್ಕೆ ಸಂಬಂಧಿಸಿದ ಅನೇಕ ಪ್ರಶ್ನೆಗಳನ್ನು ನೀಡಲಾಗಿದೆ. ಪ್ರತಿ ಪ್ರಶ್ನೆಗೂ 4 ಆಯ್ಕೆಗಳನ್ನು ಕೊಟ್ಟಿರುತ್ತಾರೆ. ಅದರಲ್ಲಿ ನಿಮಗೆ ಸರಿ ಎನಿಸಿದ ಉತ್ತರವನ್ನು ಗುರುತು ಮಾಡಿ, ನಂತರ ಪುಸ್ತಕದಲ್ಲಿ ಕೊಟ್ಟಿರುವ ಸರಿ ಉತ್ತರವನ್ನು ನೋಡಿ, ನಿಮ್ಮ ಉತ್ತರ ಸರಿಯೋ, ತಪ್ಪೋ ಎಂದು ತಿಳಿಯಬಹುದು. ಈ ರೀತಿ ಅಭ್ಯಾಸ ಮಾಡುವುದರಿಂದ ನೀವು ಪ್ರತಿ ವಿಷಯದ ಪ್ರತಿ ಪಾಠದಲ್ಲಿ ಹೆಚ್ಚಿನ ಪಾಂಡಿತ್ಯ ಪಡೆಯಬಹುದು. ಇದರ ಜೊತೆಗೆ 3-4 ಜನ ಸ್ನೇಹಿತರು ಸೇರಿ ಪ್ರಶ್ನೋತ್ತರಗಳನ್ನು ಚರ್ಚೆ ಮಾಡುತ್ತಾ ಓದಿದರೆ ಹೆಚ್ಚು ಪರಿಣಾಮಕಾರಿ ಹಾಗೂ ಬಹಳ ಕಾಲ ನೆನಪಿನಲ್ಲಿ ಉಳಿಯುತ್ತದೆ. ಪರೀಕ್ಷೆಗೆ ಉಳಿದಿರುವ ಒಟ್ಟು ದಿನಗಳಲ್ಲಿ ಎಲ್ಲಾ ವಿಷಯಗಳಿಗೂ ಸಮಯ ಸಿಗುವ ಹಾಗೆ ಒಂದು ವೇಳಾಪಟ್ಟಿಯನ್ನು ಸಿದ್ಧಪಡಿಸಿಕೊಂಡು ಅದರಂತೆ ಓದಬೇಕು. ಪರೀಕ್ಷೆ ಬರುವಷ್ಟರಲ್ಲಿ ಒಂದೆರಡು ಬಾರಿಯಾದರೂ ಪುನರಾವರ್ತನೆ ಮಾಡಿಕೊಳ್ಳಬೇಕು. ಇದರಿಂದ ಪರೀಕ್ಷೆಯಲ್ಲಿ ಎಂತಹ ಪ್ರಶ್ನೆಗಳೇ ಬಂದರೂ ಸುಲಭವಾಗಿ ಉತ್ತರಿಸಲು ಸಾಧ್ಯವಾಗುತ್ತದೆ.ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಲು ಕೆಲವು ಟಿಪ್ಸ್ GMAT (ಜಿಮ್ಯಾಟ್) ಪತ್ರಿಕೆಯಲ್ಲಿ ಒಂದೇ ಮಾದರಿಯ ಪ್ರಶ್ನೆಗಳು ಒಂದೇ ಗುಂಪಿನಲ್ಲಿರುತ್ತವೆ. ಆದ್ದರಿಂದ, ಆ ಎಲ್ಲಾ ಪ್ರಶ್ನೆಗಳಿಗೂ ಒಂದೇ ಕಡೆ ಸೂಚನೆ ನೀಡಿರುತ್ತಾರೆ. ಅದನ್ನು ಗಮನವಿಟ್ಟು ಓದಿ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿ.ಉತ್ತರಿಸುವಾಗ ಸಮಯದ ಸೂಕ್ತ ಪರಿಪಾಲನೆ ಅತ್ಯವಶ್ಯ.ಸುಲಭವಾಗಿ ಉತ್ತರಿಸುವ ಪ್ರಶ್ನೆಗಳಿಗೆ ಮೊದಲು ಉತ್ತರಿಸಿ, ನಂತರ ಕ್ಲಿಷ್ಟವೆನಿಸುವ ಪ್ರಶ್ನೆಗಳಿಗೆ ಉತ್ತರಿಸಬಹುದು.ನಿಮಗೆ ಕಷ್ಟವೆನಿಸಿದ ಪ್ರಶ್ನೆಗಳಿಗೆ ಹೆಚ್ಚಿನ ಸಮಯವನ್ನು ವ್ಯಯ ಮಾಡದೆ. ಮುಂದಿನ ಪ್ರಶ್ನೆಗಳಿಗೆ ಉತ್ತರಿಸಿ. ನಂತರ ಮುಕ್ತಾಯದ ಹಂತದಲ್ಲಿ ಪುನರ್ ಪರಿಶೀಲನೆ ಸಂದರ್ಭದಲ್ಲಿ ಉತ್ತರಿಸಬಹುದು.ನೆಗೆಟಿವ್ ಅಂಕ ಇಲ್ಲದೇ ಇರುವುದರಿಂದ ಕೆಲವು ಪ್ರಶ್ನೆಗಳಿಗೆ ಉತ್ತರ ತಿಳಿಯದಿದ್ದರೆ ಅವುಗಳನ್ನು ಹಾಗೆಯೇ ಬಿಟ್ಟು ಬರುವ ಬದಲು ಆ ಪ್ರಶ್ನೆಗೆ ನೀಡಿರುವ ಯಾವುದಾದರೂ ಒಂದು ಆಯ್ಕೆಯನ್ನು ಕಡ್ಡಾಯವಾಗಿ ಗುರುತಿಸಿ. ಯಾವ ಪ್ರಶ್ನೆಯನ್ನೂ ಬಿಡಬೇಡಿ. ಏಕೆಂದರೆ ಅಂದಾಜಿನ ಮೇಲೆ ಗುರುತಿಸಿದ ಉತ್ತರಗಳೂ ಕೆಲವೊಮ್ಮೆ ಸರಿಯಾಗಿ ನಿಮಗೆ ಅಂಕಗಳು ದೊರೆಯುತ್ತವೆ.
8ನೇ ತರಗತಿಯಲ್ಲಿ ಓದುತ್ತಿರುವ ನಿಮಗೆ ಕೇವಲ ಇದು ಒಂದೇ ಅವಕಾಶ ಇರುವುದರಿಂದ ಇದನ್ನು ನೀವು ಸರಿಯಾಗಿ ಉಪಯೋಗಿಸಿಕೊಂಡು, ಇಲ್ಲಿ ನೀಡಲಾಗಿರುವ ಮಾರ್ಗದರ್ಶನದ ಸಹಾಯದಿಂದ ಯಶಸ್ಸನ್ನು ಗಳಿಸುವಿರೆಂದು ಆಶಿಸುತ್ತೇನೆ. ಆಲ್ ದ ಬೆಸ್ಟ್.



BE THE FIRST TO COMMENT!!!
-->
ಇತರ ಸುದ್ದಿಗಳು
ರಾಷ್ಟ್ರಮಟ್ಟದ ಎನ್.ಟಿ.ಎಸ್.ಇ. ಪರೀಕ್ಷೆ: ಸಿದ್ಧತೆ ಹೇಗೆ?
ಸೌಂದರ್ಯ ಶಾಸ್ತ್ರದಲ್ಲೂ ಎಂ.ಎಸ್.ಸಿ!
ಪ್ರತಿಭೆಗಳನ್ನು ಸೃಷ್ಟಿಸಲು ಹಿಂದೇಟೇಕೆ?
ಕನ್ನಡ ಪಠ್ಯ ರಚನೆ ಬೋಧನೆಯ ಸವಾಲುಗಳು
ಪ್ರಶ್ನೆ - ಉತ್ತರ
ಉದ್ಯೋಗವಕಾಶ ಅಲ್ಲಲ್ಲಿ

© ದಿ ಪ್ರಿಂಟರ್ಸ್ (ಮೈಸೂರು) ಪ್ರೈ. ಲಿ., ನಂ. 75, ಎಂ.ಜಿ. ರಸ್ತೆ, ಬೆಂಗಳೂರು - 01. ದೂ : : 25880000 ಫ್ಯಾಕ್ಸ್:: 25880618